ಆದಾಯ ತೆರಿಗೆ
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

ಭಾರತದಲ್ಲಿ ಈಗ ಆದಾಯ ತೆರಿಗೆಯನ್ನು ವಿಧಿಸುತ್ತಿರುವ  ಆದಾಯ ತೆರಿಗೆ ಕಾನೂನು 1961,  ಏಪ್ರಿಲ್ 1, 1962ರಿಂದ ಜಾರಿಗೆ ಬಂದಿದೆ. ಈ ಕಾನೂನು ಕಾಲಕಾಲಕ್ಕೆ ಬದಲಾವಣೆ ಹೊಂದಿದೆ. 	
	
ಓರ್ವ ವ್ಯಕ್ತಿಯ ಆದಾಯ ತೆರಿಗೆಯನ್ನು ಕರ ನಿರ್ಧರಣಾ ವರ್ಷದ (ಅಸೆಸ್‍ಮೆಂಟ್ ಇಯರ್)   ಹಿಂದಿನ ವರ್ಷದ (ಪ್ರೀವಿಯಸ್ ಇಯರ್) ಅಂದರೆ 2005-06ರ ವರ್ಷದಲ್ಲಿ ಸಂಪಾದನೆ ಮಾಡಿದ ಆದಾಯಕ್ಕೆ ತೆರಿಗೆಯನ್ನು ಕರ ನಿರ್ಧರಣಾ ವರ್ಷದಲ್ಲಿ ಅಂದರೆ 2006-07ರಲ್ಲಿ ಕಟ್ಟಬೇಕು. 
	
ಆದಾಯ ತೆರಿಗೆ ಕಾನೂನಿನಲ್ಲಿ ತೆರಿಗೆದಾರರನ್ನು ವ್ಯಕ್ತಿ  (ಇಂಡಿವಿಡುಯಲ್), ಹಿಂದೂ ಅವಿಭಕ್ತ ಕುಟುಂಬ, ಪಾಲುದಾರಿಕಾ ಸಂಸ್ಥೆ, ಕಂಪನಿಗಳು, ಟ್ರಸ್ಟಗಳು, ಸ್ಥಳೀಯ ಸಂಸ್ಥೆ, ವ್ಯಕ್ತಿಗಳ ಗುಂಪು, ಎಂದು ಮುಂತಾಗಿ ವಿಭಾಗಿಸಲಾಗಿದೆ. 
	
ಆದಾಯವನ್ನು 5 ವಿಭಾಗಗಳಾಗಿ ವಿಂಗಡಿಸಲಾಗಿದೆ: 
ಸಂಬಳ, 
 ಬಾಡಿಗೆ, 
 ವ್ಯಾಪಾರ ಅಥವಾ ವೃತ್ತಿಯಿಂದ ಬಂದ ಆದಾಯ,
 ಮೂಲಧನ ಲಾಭ (ಕ್ಯಾಪಿಟಲ್ ಗೇನ್),
 ಇತರೇ ಮೂಲಗಳಿಂದ ಬಂದ ಆದಾಯ

ಆದಾಯ ತೆರಿಗೆ ವಿನಾಯತಿಗಳು:  ಕೆಳಕಂಡ ಆದಾಯಗಳಿಗೆ ಆದಾಯ ತೆರಿಗೆ ವಿನಾಯತಿಗಳು ದೊರಕುತ್ತವೆ. 
1. ಕೃಷಿಯಿಂದ ಬಂದ ಆದಾಯ, 2. ವ್ಯಕ್ತಿಯು ಹಿಂದೂ ಅವಿಭಕ್ತ ಕುಟುಂಬದಿಂದ ಪಡೆದ ಹಣ, 3. ಪಾಲುದಾರಿಕೆ ಸಂಸ್ಥೆಯಿಂದ ಪಡೆದ ಲಾಭಾಂಶ, 4. ರಜಾ ಪ್ರಯಾಣದಲ್ಲಿ ಪಡೆದ ಭತ್ಯೆ, 5. ಗ್ರಾಚ್ಯೂಟಿ, 6. ಕಮ್ಯೂಟೆಡ್ ಪೆನ್ಷ್‍ನ್, 7. ನಿವೃತ್ತಿಯ ಸಮಯದಲ್ಲಿ ಸಂಬಳದಾರನು ಪಡೆಯುವ ಹತ್ತು ತಿಂಗಳವರೆಗಿನ ರಜಾ ಸಂಬಳ, 8. ಔದ್ಯೋಗಿಕ ತಂಟೆ ಅಧಿನಿಯಮ 1947ರ ಅಡಿಯಲ್ಲಿ ಪಡೆದ ಯಾವುದೇ ಪರಿಹಾರ, 9. ಭೋಪಾಲ್ ಅನಿಲ ದುರಂತದಲ್ಲಿ ಪಡೆದ ಪರಿಹಾರ, 10. ಸ್ವಯಂ ನಿವೃತ್ತಿ ಯೋಜನೆಯಡಿ ಪಡೆದ ಐದು ಲಕ್ಷದವರೆಗಿನ ಪರಿಹಾರ, 11. ಬಾಡಿಗೆ ಭತ್ಯೆ, 12. ವಿಶೇಷ ಭತ್ಯೆಗಳು, 13. ಆದಾಯ ತೆರಿಗೆ ವಿನಾಯತಿ ಪಡೆದ ಬಾಂಡ್‍ಗಳಿಂದ ಪಡೆದ ಬಡ್ಡಿ, 14. ವಿದ್ಯಾರ್ಥಿ  ವೇತನ, 15. ಲೋಕಸಭೆ ಹಾಗು ವಿಧಾನ ಸಭೆಯಲ್ಲಿ ಸದಸ್ಯರು ಪಡೆಯುವ ದಿನಭತ್ಯೆ, 16. ಪರಮವೀರ ಚಕ್ರ , ಮಹಾವೀರ ಚಕ್ರ , ವೀರ ಚಕ್ರ , ಪಡೆದ ವ್ಯಕ್ತಿಗಳು ಪಡೆಯುವ ಪೆನ್ಷನ್, 17. ಸ್ಥಳೀಯ ಸಂಸ್ಥೆಗಳ ಆದಾಯ, 18. ಅನುಮತಿ ಪಡೆದ ವೈಜ್ಞಾನಿಕ ಸಂಶೇಧನಾಲಯಗಳ ಆದಾಯ, 19.ಸುದ್ದಿ ಸಂಸ್ಥೆಗಳ ಆದಾಯ, 20. ಖಾದಿ ಮತ್ತು ಗ್ರಾಮೀಣಾಭಿವೃದ್ದಿ ಸಂಸ್ಥೆಗಳ ಆದಾಯ, 21. ವಿಶ್ವವಿದ್ಯಾನಿಲಯಗಳ ಒಂದು ಕೋಟಿಯವರೆಗಿನ ಆದಾಯ,  22. ಕಂಪನಿಗಳಿಂದ ಅಥವಾ ಮ್ಯೂಚ್ಯುವಲ್ ಫಂಡ್‍ಗಳಿಂದ ಪಡೆದ ಲಾಭಾಂಶ, 23. ಟ್ರೇಡ್ ಯೂನಿಯನ್‍ಗಳ ಆದಾಯ, 24. ವ್ಯಕ್ತಿಯ ಆದಾಯದೊಂದಿಗೆ ಕಿರಿಯರ (ಮೈನರ್) ಆದಾಯವನ್ನು ಸೇರಿಸಿದ್ದಲ್ಲಿ  ಒಂದೂವರೆ ಸಾವಿರದವರೆಗಿನ ಆದಾಯ,  25. ಒಂದು ವರ್ಷದ ನಂತರ ಆಧಿಕೃತ ಸ್ಟಾಕ್‍ಎಕ್ಸ್‍ಚೇಂಜ್ ಮೂಲಕ ಮಾರಾಟ ಮಾಡಿದ ಷೇರಿನ ಮೇಲೆ ಬಂದ ಲಾಭಾಂಶ. 
ಆದಾಯ ತೆರಿಗೆಯನ್ನು ಲೆಕ್ಕ ಹಾಕುವಾಗ ಆ ವ್ಯಕ್ತಿಯ ಎಲ್ಲಾ ಆದಾಯಗಳನ್ನು ಸೇರಿಸಿ ನಂತರ ರಿಯಾಯತಿಗಳು ಕಳೆದು ಲೆಕ್ಕ ಹಾಕಬೇಕು. 

	ಆದಾಯ ತೆರಿಗೆ ರಿಯಾಯತಿಗಳು. ಅಧ್ಯಾಯ 6ಎ ಅಡಿಯಲ್ಲಿ ಸೆಕ್ಷನ್ 80ಸಿ ಯಿಂದ 80ಯು ವರೆಗೆ ದೊರೆಯುವ ರಿಯಾಯತಿಗಳು. 

ಸೆಕ್ಷನ್ 80ಸಿ: ಈ ಹಿಂದೆ ಸೆಕ್ಷನ್ 80 ಸಿ ಯ ಅಂತರ್ಗತ ದೊರೆಯುತ್ತಿದ್ದ ರಿಯಾಯತಿಗಳನ್ನು 1990ರಿಂದ ಸೆಕ್ಷನ್ 88ರ ಅಡಿ ದೊರೆಯುತ್ತಿತ್ತು ಪುನಃ 2006-07ರಿಂದ ಈ ರಿಯಾಯತಿಯನ್ನು ಸೆಕ್ಷನ್ 80ಸಿಗೆ ವರ್ಗಾಯಿಸಲಾಗಿದೆ. 
 	
ಇದರಡಿ ವ್ಯಕ್ತಿಯು ಈ ಕೆಳಕಂಡ ಯೋಜನೆಯಲ್ಲಿ ಹಣ ಹೂಡಿದರೆ ರಿಯಾಯತಿ ನೀಡಲಾಗುವುದು. ಜೀವ ವಿಮಾಪಾಲಸಿಯ ಪ್ರಿಮಿಯಂ, ಪ್ರಾವಿಡೆಂಟ್ ಫಂಡ್, ಪಬ್ಲಿಕ್ ಪ್ರಾವಿಡೆಂಟ್ ಫಂಡ್, ಯುಲಿಪ್‍ಳಲ್ಲಿ ವಿನಿಯೋಜಿಸುವ ಹಣ, ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕೊಟ್ಟ ಶಾಲೆಗೆ ಕಟ್ಟಿದ ಶುಲ್ಕ, ವಾಸಿಸುವ ಮನೆ ಕಟ್ಟಿದಲ್ಲಿ ಅಥವ ಗೃಹ ಸಾಲವನ್ನು ಹಿಂತಿರುಗಿಸಿದ್ದಲ್ಲಿ, ರಿಯಾಯತಿ ಸಿಗುತ್ತದೆ. 

 ಸೆ: 80ಸಿಸಿಸಿ: ಪೆನ್ಷನ್ ಫಂಡ್‍ಗಳಲ್ಲಿ ವಿನಿಯೋಜಿಸಿದ ಹಣ.  
 ಸೆ: 80ಸಿಸಿಡಿ: ಕೇಂದ್ರ ಸರ್ಕಾರದ ಪೆನ್ಷನ್ ಯೋಜನೆಗಳಲ್ಲಿ ವಿನಿಯೋಜಿಸಿದ ಹಣ. 
 ಸೆ: 80ಸಿ, 80ಸಿಸಿಸಿ ಮತ್ತು 80ಸಿಸಿಡಿ ಯಲ್ಲಿ ದೊರಕುವ ಒಟ್ಟು ರಿಯಾಯತಿ ಒಂದು ಲಕ್ಷ ರೂಪಾಯಿಗಳು.
 ಸೆ: 80ಡಿ:  ಮೆಡಿಕ್ಲೈಮ್ ಪಾಲಸಿಯ ಪ್ರಿಮಿಯಂ ಕಟ್ಟಿದ್ದಲ್ಲಿ ಗರಿಷ್ಟ 10 ಸಾವಿರ ರೂ 
 ಸೆ: 80 ಡಿಡಿ: ವ್ಯಕ್ತಿಯ ಹಾಗು ಆತನ ದೈಹಿಕವಾಗಿ ಊನಗೋಂಡು  ಅವಲಂಬಿತರಾಗಿರುವರ  ಕೆಲವು ನಿರ್ಧಿಷ್ಟ ಪಡಿಸಿದ ಖಾಯಿಲೆಗಳಿಗೆ ಖರ್ಚು ಮಾಡಿದ್ದಲ್ಲಿ ಗರಿಷ್ಟ 50,000ರೂಗಳವರೆಗೆ 
 ಸೆ: 80 ಡಿಡಿಬಿ: ವ್ಯಕ್ತಿಯ ಹಾಗು ಆತನ ಅವಲಂಬಿತರ  ಕೆಲವು ನಿರ್ಧಿಷ್ಟ ಪಡಿಸಿದ ಖಾಯಿಲೆಗಳಿಗೆ ಖರ್ಚು ಮಾಡಿದ್ದಲ್ಲಿ ಗರಿಷ್ಟ 40,000ರೂಗಳವರೆಗೆ  
 ಸೆ: 80 ಇ: ವ್ಯಕ್ತಿಯು ತನ್ನ ಉನ್ನತ ಶಿಕ್ಷಣಕ್ಕಾಗಿ ಪಡೆದ ಸಾಲದ ಮೇಲಿನ ಬಡ್ಡಿಯ ಮರುಪಾವತಿ ಮಾಡಿದ ಹಣ
 ಸೆ: 80 ಜಿ  ಕೆಲವು ನಿರ್ಧಿಷ್ಟ ಪಡಿಸಿದ ಸಂಸ್ಥೆಗಳಿಗೆ ನೀಡಿದ ದೇಣಿಗೆಗಳಿಗೆ ನಿಯಮಗಳಿಗೊಳಪಟ್ಟು ಶೇ.50ರಿಂದ ಶೇ 100ವರೆಗಿನ   ದೇಣಿಗೆಗಳಿಗೆ ವಿನಾಯತಿ ದೊರೆಯುತ್ತದೆ. 
 ಸೆ: 80 ಜಿಜಿ:  ಮನೆ ಬಾಡಿಗೆ ನೀಡುವ ವ್ಯಾಪಾರಿಗು ಹಾಗು ಬಾಡಿಗೆ ಭತ್ಯೆ ಪಡೆಯದ ಉದ್ಯೋಗಿಗಳಿಗೆ ಗರಿಷ್ಟ ತಿಂಗಳಿಗೆ 2,000 ಮಿತಿಯೊಂದಿಗೆ ವಿನಾಯತಿ ದೊರೆಯುತ್ತದೆ. 
ಆದಾಯ ತೆರಿಗೆ ದರಗಳು (2006): ಸಾಮಾನ್ಯ ದರ:

 ಸಮಾನ್ಯ ವ್ಯಕ್ತಿಗಳು ಹಾಗು ಹಿಂದೂ ಅವಿಭಕ್ತ ಕುಟುಂಬಗಳ ಆದಾಯ 
	ಒಂದು ಲಕ್ಷರೂಪಾಯಿವರೆಗೆ   ಇದ್ದಲ್ಲಿ  	-  ಏನೂ ಇಲ್ಲ 
	ಒಂದರಿಂದ ಒಂದೂವರೆ ಲಕ್ಷ ರೂಪಾಯಿವರೆಗೆ - ಶೇ 10 
 	ಒಂದೂವರೆಯಿಂದ ಎರಡೂವರೆ ಲಕ್ಷರೂಗಳಿಗೆ -  ಶೇ 20
	ಎರಡೂವರೆ ಲಕ್ಷಕ್ಕೆ ಮೇಲ್ಪಟ್ಟ ಆದಾಯಕ್ಕೆ 	- 	ಶೇ 30 
ಇದಕ್ಕೆ ಶೇಕಡ 2ರಷ್ಟು ಸೆಸ್ ಸೇರಿಸಬೇಕು. ಹಾಗು ಆದಾಯ ಹತ್ತು ಲಕ್ಷಕ್ಕಿಂತ ಮಿಗಿಲಾಗಿದ್ದಲ್ಲಿ ಸರ್‍ಛಾರ್ಜ್ ಶೇ10ರಷ್ಟು ಸೇರಿಸಬೇಕು 

ಮಹಿಳೆಯರಿಗೆ 
  ಆದಾಯ ಒಂದು ಲಕ್ಷ ಮೂವತ್ತೈದು ಸಾವಿರ ರೂಪಾಯಿವರೆಗೆ ಇದ್ದಲ್ಲಿ  				-  ಏನೂ ಇಲ್ಲ 
 ಒಂದು ಲಕ್ಷ ಮುವತ್ತೈದು ಸಾವಿರದಿಂದ ಒಂದೂವರೆ ಲಕ್ಷ ರೂಪಾಯಿವರೆಗೆ 						- ಶೇ 10 
 ಒಂದೂವರೆಯಿಂದ ಎರಡೂವರೆ ಲಕ್ಷರೂಗಳಿಗೆ -  ಶೇ 20
 ಎರಡೂವರೆ ಲಕ್ಷಕ್ಕೆ ಮೇಲ್ಪಟ್ಟ ಆದಾಯಕ್ಕೆ 	- 	ಶೇ 30 
ಇದಕ್ಕೆ ಶೇಕಡ 2ರಷ್ಟು ಸೆಸ್ ಸೇರಿಸಬೇಕು. ಹಾಗು ಆದಾಯ ಹತ್ತು ಲಕ್ಷಕ್ಕಿಂತ ಮಿಗಿಲಾಗಿದ್ದಲ್ಲಿ ಸರ್‍ಛಾರ್ಜ್ ಶೇ10ರಷ್ಟು ಸೇರಿಸಬೇಕು 

ಹಿರಿಯ ನಾಗರೀಕರ ಆದಾಯ (ಅಂದರೆ 65ವರ್ಷ ಮೇಲ್ಪಟ್ಟ ವ್ಯಕ್ತಿಗಳು) 
 ಒಂದು ಲಕ್ಷ ಎಂಬತ್ತೈದು ಸಾವಿರ ರೂಪಾಯಿವರೆಗೆ   ಇದ್ದಲ್ಲಿ  									-  ಏನೂ ಇಲ್ಲ 
 ಒಂದು ಲಕ್ಷ ಎಂಬತ್ತೈದು ಸಾವಿರ ರೂಪಾಯಿಯಿಂದ ಎರಡೂವರೆ ಲಕ್ಷರೂಗಳಿಗೆ 						-  ಶೇ 20
 ಎರಡೂವರೆ ಲಕ್ಷಕ್ಕೆ ಮೇಲ್ಪಟ್ಟ ಆದಾಯಕ್ಕೆ 	- 	ಶೇ 30 
ಇದಕ್ಕೆ ಶೇಕಡ 2ರಷ್ಟು ಸೆಸ್ ಸೇರಿಸಬೇಕು. ಹಾಗು ಆದಾಯ ಹತ್ತು ಲಕ್ಷಕ್ಕಿಂತ ಮಿಗಿಲಾಗಿದ್ದಲ್ಲಿ ಸರ್‍ಛಾರ್ಜ್ ಶೇ10ರಷ್ಟು ಸೇರಿಸಬೇಕು 
 
ಪಾಲುದಾರಿಕಾಸಂಸ್ಥೆಗಳಿಗೆ - ಶೇ 30 ಜೊತೆಗೆ ಶೇ 10 ರಷ್ಟು ಸರ್‍ಛಾರ್ಜ್ ಮತ್ತು ಶೇ 2ರಷ್ಟು ಸೆಸ್.

ಕಂಪನಿಗಳಿಗೆ - ಶೇ 30 ಜೊತೆಗೆ ಶೇ 10 ರಷ್ಟು ಸರ್‍ಛಾರ್ಜ್ ಮತ್ತು ಶೇ 2ರಷ್ಟು ಸೆಸ್.

ವಿಶೇಷ ದರಗಳು (2006): 
ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಷೇರುಗಳನ್ನು  ಅಧಿಕೃತ ಸ್ಟಾಕ್ ಎಕ್ಸಚೇಂಜ್ ಮೂಲಕ ಮಾರಾಟ ಮಾಡಿ ಬಂದ ಹಣದ ಮೂಲಧನದಲ್ಲಿ ಬಂದ ಹೆಚ್ಚುವರಿ ಆದಾಯಕ್ಕೆ ತೆರಿಗೆ ಶೇ 10
ಕುದುರೆ ರೇಸು, ಲಾಟರಿ ಮುಂತಾದವುಗಳಿಂದ ಬಂದ ಹಣಕ್ಕೆ ಶೇ 30 
ಲಾಂಗ್‍ಟರ್ಮ್ ಕ್ಯಾಪಿಟಲ್ ಗೇನ್ 		ಶೇ: 20
	
ಮುಂಗಡ ತೆರಿಗೆ (2006): ಕರದಾರರ ವಾರ್ಷಿಕ ತೆರಿಗೆ ರೂ.5,000 ಮೇಲ್ಪಟ್ಟಿದ್ದರೆ ಅವರುಗಳು ತೆರಿಗೆಯನ್ನು ಮುಂಚಿತವಾಗಿಯೇ ಲೆಕ್ಕ ಹಾಕಿ ಕಟ್ಟಬೇಕು. 
ಇದು ಕಂಪನಿಗಳಿಗಾದರೆ, ಜೂನ್ 15ಕ್ಕೆ ಮುಂಚೆ  - ಶೇ 15
				ಸೆಪ್ಟಂಬರ್ 15ಕ್ಕೆ ಮುಂಚೆ - ಶೇ 45
				ಡಿಸಂಬರ್ 15ಕ್ಕೆ ಮುಂಚೆ - ಶೇ 75
				ಮಾರ್ಚ್15ಕ್ಕೆ ಮುಂಚೆ - ಶೇ 100 
ಕಂಪನಿಗಳಲ್ಲದವರಿಗೆ ಅಂದರೆ ವ್ಯಕ್ತಿ  (ಇಂಡಿವಿಡುಯಲ್), ಹಿಂದೂ ಅವಿಭಕ್ತ ಕುಟುಂಬ, ಪಾಲುದಾರಿಕಾ ಸಂಸ್ಥೆ, ಇತ್ಯಾದಿ 
ಸೆಪ್ಟಂಬರ್ 15ಕ್ಕೆ ಮುಂಚೆ - ಶೇ 30
ಡಿಸಂಬರ್ 15ಕ್ಕೆ ಮುಂಚೆ - ಶೇ 60
ಮಾರ್ಚ್15ಕ್ಕೆ ಮುಂಚೆ - ಶೇ 100 
ಮುಂಗಡತೆರಿಗೆ ಕಟ್ಟಿರುವುದಕ್ಕೂ ಹಾಗು ಅಂತಿಮ ಕರ  ನಿರ್ಧರಣೆಗೂ ಶೇಕಡ 90ಕ್ಕಿಂತ ಹೆಚ್ಚಿನ ವ್ಯತ್ಯಾಸ ಕಂಡುಬಂದಲ್ಲಿ ಶೇ 1ರಷ್ಟು  ಬಡ್ಡಿಯನ್ನು ಕೊಡಬೇಕಾಗುತ್ತದೆ. 
	
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಕಂಪನಿಗಳಿಗೆ ಹಾಗು ಕಡ್ಡಾಯವಾಗಿ ಆಡಿಟ್ ಮಾಡಿಸಬೇಕಾಗಿರುವ ಸಂಸ್ಥೆಗಳಿಗೆ ಹಾಗು ಅದರ ಪಾಲುದಾರರಿಗೆ  ಅಕ್ಟೋಬರ್ 31 , ಇತರರಿಗೆ ಜುಲೈ 31.
ಬ್ಯಾಂಕುಗಳಿಂದ ಹಣ ಪಡೆದಾಗ ವಿಧಿಸುವ ತೆರಿಗೆ (ಬ್ಯಾಂಕಿಂಗ್ ಕ್ಯಾಷ್ ಟ್ರಾನ್ಸಾಕ್ಷನ್ ಟ್ಯಾಕ್ಸ್) (2006): ಸಾಮಾನ್ಯ ವ್ಯಕ್ತಿಗಳು ಹಾಗು ಹಿಂದೂ ಅವಿಭಕ್ತ ಕುಟುಂಬದವರು ತಮ್ಮ ಖಾತೆಯಿಂದ (ಉಳಿತಾಯ ಖಾತೆ ಬಿಟ್ಟು)  25,000 ರೂಗಳಿಗಿಂತ ಹೆಚ್ಚು ಹಣವನ್ನು ಒಂದೇ ದಿನದಲ್ಲಿ ಪಡೆದುಕೊಂಡರೆ, ಇತರೇ ವ್ಯಕ್ತಿಗಳು ತಮ್ಮ ಖಾತೆಯಿಂದ (ಉಳಿತಾಯ ಖಾತೆ ಬಿಟ್ಟು)  1,00,000 ರೂಗಳಿಗಿಂತ ಹೆಚ್ಚು ಹಣವನ್ನು ಒಂದೇ ದಿನದಲ್ಲಿ ಪಡೆದುಕೊಂಡರೆ, ಅವರು ಶೇ0.1ರಷ್ಟು ತೆರಿಗೆಯನ್ನು ನೀಡಬೇಕಾಗುತ್ತದೆ. ಈ ತೆರಿಗೆಯನ್ನು ಬ್ಯಾಂಕುಗಳು ತಮ್ಮ ಖಾತೆದಾರರಿಂದ ಪಡೆದು ಸರ್ಕಾರಕ್ಕೆ ಪಾವತಿಸÀಬೇಕು. 01.04.2005ರಿಂದ ಇದು ಜಾರಿಗೆ ಬಂದಿದೆ.
ಸೌಲಭ್ಯಗಳ ಮೇಲೆ ವಿಧಿಸುವ ತೆರಿಗೆ (ಫ್ರಿಂಜ್ ಬೆನೆಫಿಟ್ ಟ್ಯಾಕ್ಸ್) (2006) :	ಕರ ನಿರ್ಧರಣಾ ವರ್ಷ 2006-07ರಿಂದ ಅಂದರೆ ಆರ್ಥಿಕ ವರ್ಷ 2005 - 06ರಿಂದ ಈ ಹೊಸ ತೆರಿಗೆ ಜಾರಿಗೆ ಬಂದಿದೆ. ಇದು ಉದ್ಯೋಗದಾತರ ಮೇಲೆ ಮಾತ್ರ ವಿಧಿಸಲಾಗಿದ್ದು ಮತ್ತು ಉದ್ಯೋಗದಾತನು ಸಾಮಾನ್ಯವ್ಯಕ್ತಿ, ಹಿಂದೂ ಅವಿಭಕ್ತ ಕುಟುಂಬ, ಕೇಂದ್ರ ಹಾಗು ರಾಜ್ಯ ಸರ್ಕಾರಗಳಿಗೆ ಈ ತೆರಿಗೆಯಿಂದ ವಿನಾಯತಿ ಇದೆ. ಅಂದರೆ ಕಂಪನಿಗಳು, ಪಾಲುದಾರಿಕಾ ಸಂಸ್ಥೆಗಳು, ವ್ಯಕ್ತಿಗಳ ಗುಂಪು, ಹಾಗು ಸ್ಥಳೀಯ ಸಂಸ್ಥೆಗಳು ಯಾರಿಗಾದರು ಕೆಲಸ ಕೊಟ್ಟಲ್ಲಿ ಈ ತೆರಿಗೆಯನ್ನು ನೀಡಬೇಕಾಗುತ್ತದೆ. 
ಉದ್ಯೋಗದಾತನು ಕೆಳಕಂಡ ಖರ್ಚುಗಳನ್ನು ಮಾಡಿದ್ದಲ್ಲಿ ಆತ ತೆರಿಗೆ ನೀಡಬೇಕಾಗುತ್ತದೆ.

ಕ್ರಮ ಸಂಖ್ಯೆ
ಖರ್ಚುಗಳ ವಿವರ
ತೆರಿಗೆಗೊಳಪಡುವ ಮೊತ್ತ

1
ಉಚಿತವಾಗಿ ಉದ್ಯೋಗಿಗಳಿಗೆ ಹಾಗು ಅವರ ಮನೆಯವರಿಗೆ ಮಾಡಿದ ಪ್ರಯಾಣದ ಖರ್ಚು
ಶೇ:100,

2
ಸೂಪರ್ ಅನ್ಯೂಟೀ ಫಂಡ್‍ಗೆ ಮಾಡಿದ ಖರ್ಚು
ಶೇ:100

3
ಮನರಂಜನಾ ಖರ್ಚು
ಶೇ:20

4
ಉದ್ಯೋಗಿಗಳಿಗೆ ಕೆಲಸ ಮಾಡುವ ಸ್ಥಳ ಬಿಟ್ಟು ಇತರೆಡೆಗಳಲ್ಲಿ ಊಟ ಉಪಹಾರಗಳಿಗಾಗಿ ಮಾಡುವ ಖರ್ಚು
ಶೇ:20

5
ಸಮ್ಮೇಳನಗಳ ಖರ್ಚು
ಶೇ:20

6
ಮiÁರಾಟಾಭಿವೃಧ್ದಿಗಾಗಿ ಮಾಡುವ ಖರ್ಚು
ಶೇ:20

7
ಉದ್ಯೋಗಿಗಳ ಅಭಿವೃಧ್ದಿಗಾಗಿ ಮಾಡುವ ಖರ್ಚು
ಶೇ:20

8
ಓಡಾಟ ಹಾಗು ಪ್ರಯಾಣದ ಖರ್ಚು (ವಿದೇಶ ಪ್ರಯಾಣ ಸೇರಿ)
ಶೇ:20

9
ಹೋಟೆಲ್ ಖರ್ಚು ( ಊಟ ಮತ್ತು ವಸತಿ)
ಶೇ:20

10
ಕಾರುಗಳ ಮೇಲಿನ ಖರ್ಚು - ಸವಕಳಿಯೂ ಸೇರಿದಂತೆ
ಶೇ:20

11
ವಿಮಾನಗಳ ಮೇಲಿನ ಖರ್ಚು - ಸವಕಳಿಯೂ ಸೇರಿದಂತೆ
ಶೇ:20

12
ದೂರವಾಣಿ ಹಾಗು ಮೊಬೈಲ್ ದೂರವಾಣಿ
ಶೇ:20

13
ಅತಿಥಿ ಗೃಹಗಳ  ನಿರ್ವಹಣಾ ಖರ್ಚು
ಶೇ:20

14
ಹಬ್ಬ ಹರಿದಿನಗಳಿಗಾಗಿ ಮಾಡಿದ ಖರ್ಚು
ಶೇ:50

15
ಹÉಲ್ತ್ ಕ್ಲಬ್‍ಗಳ ಹಾಗು ಇತರೇ ಕ್ಲಬ್‍ಗಳ ಖರ್ಚು
ಶೇ:50

16
ಉಡುಗೊರೆಗಳು
ಶೇ:50

17
ವಿದ್ಯಾರ್ಥಿವೇತನಗಳು
ಶೇ:50

	ತೆರಿಗೆ ದರ ಶೇ: 30 
ಉದಾಹರಣೆಗೆ ಉದ್ಯೋಗದಾತನು ಹೋಟೆಲ್‍ಗಳ ಮೇಲೆ ಮಾಡಿದ ಖರ್ಚು 1,00,000 ರೂಪಾಯಿಗಳಾದಲ್ಲಿ ಆತ ನೀಡಬೇಕಾದ ತೆರಿಗೆ 
ತೆರಿಗೆಗೊಳಪಡುವ ಮೊತ್ತ  = ಶೇ 20 = 20,000 
ತೆರಿಗೆ = ಶೇ 30 ರಷ್ಟು 20,000ದ ಮೇಲೆ ಅಂದರೆ 6,000 ರೂಗಳು.
ಸೆಸ್ ಶೇ: 2 = 120
ಒಟ್ಟು ತೆರಿಗೆ 6,120
ಶೇರು ಬಂಡವಾಳದ ಮೇಲಿನ ವ್ಯವಹಾರಗಳ ಮೇಲಿನ ತೆರಿಗೆ  (ಸೆಕ್ಯೂರಿಟಿ ಟ್ರಾನ್ಸಾಕ್ಷನ್ ಟ್ಯಾಕ್ಸ್) (2006): 	ಅಧಿಕೃತ ಸ್ಟಾಕ್‍ಎಕ್ಸಚೇಂಜ್‍ಗಳಲ್ಲಿ ನಡೆಸುವ ವ್ಯವಹಾರಗಳಿಗೆ ಈ ತೆರಿಗೆಯನ್ನು ನೀಡಬೇಕಾಗಿದೆ. 
	
ಈ ತೆರಿಗೆಯು ಶೇರನ್ನು ನಿಜವಾಗಿಯೂ ಪಡೆಯದೇ ಆ ದಿನದಲ್ಲೇ ನಡೆಸಿದ ವ್ಯವಹಾರಗಳಿಗೆ ಶೇ:0.1, ಶೇರನ್ನು ನಿಜವಾಗಿಯೂ ಪಡೆಯದೇ ಆ ದಿನದಲ್ಲೇ ವಾಯಿದೆ ಮೂಲಕ ನಡೆಸಿದ ವ್ಯವಹಾರಗಳಿಗೆ (ಫ್ಯೂಚರ್ ಮತ್ತು ಆಪ್ಶನ್) ಶೇ: 0.0133, ಶೇರನ್ನು ನಿಜವಾಗಿಯು ಪಡೆದುಕೊಂಡಲ್ಲಿ ಇದು ಶೇ0.2ರಷ್ಟು ಹಣವನ್ನು ನೀಡಬೇಕಾಗಿದೆ. 
ಇದು 2006ನೇ ಜೂನ್ 1ರಿಂದ ಇದರ ದರಗಳು ಶೇ:25ರಷ್ಟು ಹೆಚ್ಚಾಗಲಿವೆ ಅಂದರೆ 0.125% 0.017% 0.25%. 
ಈ ತೆರಿಗೆಯನ್ನು ವ್ಯಾಪಾರ ಮತ್ತು ವ್ಯವಹಾರದಡಿಯಲ್ಲಿ ಲಾಭ ತೋರಿಸಿದಾಗ ಆದಾಯತೆರಿಗೆಯ ಸೆ:88ಇ ಅನ್ವಯ ಆದಾಯತೆರಿಗೆ ರಿಯಾಯತಿ ಪಡೆಯಬಹುದು.
ಸೇವಾ ತೆರಿಗೆ (ಸರ್ವೀಸ್ ಟ್ಯಾಕ್ಸ್) (2006):  ಸೇವಾ ತೆರಿಗೆಯು ಒಂದು ಪರೋಕ್ಷ ತೆರಿಗೆಯಾಗಿದ್ದು, ಇದನ್ನು ಡಾ|| ರಾಜ ಚಲ್ಲಯ್ಯ ಕಮಿಟಿಯ ಶಿಫಾರಸ್ಸಿನ ಮೇರೆಗೆ ಕೇಂದ್ರ ಸರ್ಕಾರವು 1994ರಲ್ಲಿ ಜಾರಿಗೆ ತಂದಿತು. ರಾಷ್ಟ್ರದ ಒಟ್ಟು ಸಮಗ್ರ ಅಂತರ್ದೇಶೀಯ ಉತ್ಪನ್ನ (ಜಿಡಿಪಿ)ದಲ್ಲಿ ಸೇವಾ ವಲಯದ ಆದಾಯದ ಭಾಗವು ಶೇಕಡ 51ರಷ್ಟಿದೆ. ಪ್ರಾರಂಭದಲ್ಲಿ ಕೇವಲ 3 ಸೇವೆಗಳ ಮೇಲೆ ಮಾತ್ರ ಇದ್ದ ತೆರಿಗೆಯು ನಂತರದ ವರ್ಷಗಳಲ್ಲಿ ಇದರ ವ್ಯಾಪ್ತಿಯು ಹೆಚ್ಚುತ್ತಾ ಹೋಗಿದ್ದು ಈಗ ಅಂದರೆ 2006ನೇ ವರ್ಷದಲ್ಲಿ ಇದು 92 ಸೇವೆಗಳ ಮೇಲೆ ವಿಧಿಸಲಾಗುತ್ತಿದೆ. 
2003ರಲ್ಲಿ ಕೇಂದ್ರ ಸರ್ಕಾರವು ಸಂವಿಧಾನಕ್ಕೆ ತಿದ್ದುಪಡಿ ತರುವುದರ ಮೂಲಕ ಸೇವಾತೆರಿಗೆಯನ್ನು 7ನೇ ಅನುಸೂಚಿಯಲ್ಲಿ ಕೇಂದ್ರದ ಪಟ್ಟಿಗೆ ಸೇರಿಸಿತು. ಆದರೂ ಸಹ ಸೇವಾತೆರಿಗೆಯನ್ನು 1994ರ ವಿತ್ತೀಯ ಕಾಯಿದೆ ಅನ್ವಯ ಹಾಗು ನಂತರದ ವರ್ಷಗಳ ವಿತ್ತೀಯ ಕಾಯಿದೆಯ ತಿದ್ದುಪಡಿಗಳೊಂದಿಗೆ ವಿಧಿಸಲಾಗುತ್ತಿದೆ. ಸಧ್ಯಕ್ಕೆ ಸೇವಾತೆರಿಗೆಯ ನಿರ್ವಹಣೆಯನ್ನು ಕೇಂದ್ರೀಯ ಅಬಕಾರಿ ಇಲಾಖೆಯು ನೋಡಿಕೊಳ್ಳುತ್ತದೆ. 

ಸೇವಾ ತೆರಿಗೆದಾರರ ನೊಂದಣಿ: ಸೇವಾತೆರಿಗೆಯ ವ್ಯಾಪ್ತಿಗೆ ಒಳಪಡುವ ಪ್ರತಿಯೊಬ್ಬ ವ್ಯಕ್ತಿಯು ಅರ್ಜಿ ಸಂಖ್ಯೆ: Sಖಿ 1 ರಲ್ಲಿ ಸಲ್ಲಿಸಬೇಕು. 30 ದಿನಗಳೊಳಗಾಗಿ ತನ್ನ ವ್ಯಾಪ್ತಿಗೆ ಬರುವ ಕೇದ್ರೀಯ ಅಬಕಾರಿ ಇಲಾಖೆಯಲ್ಲಿ ಸಲ್ಲಿಸಬೇಕು. ಹಾಗು ಇದಕ್ಕೂ ಮುಂಚೆ ಪ್ರತಿಯೊಬ್ಬ ವ್ಯಕ್ತಿಯು ಆದಾಯತೆರಿಗೆ ಇಲಾಖೆ ನೀಡುವ ಪ್ಯಾನ್ ಸಂಖ್ಯೆ ಇಲ್ಲದಿದ್ದರೆ ಪಡೆಯುವುದು ಅವಶ್ಯಕವಾಗಿದೆ. ನಂತರ ಕೇಂದ್ರ ಅಬಕಾರಿ  ಇಲಾಖೆಯ ಸೇವಾ ತೆರಿಗೆ ವಿಭಾಗವು 7 ದಿನಗಳೊಳಗಾಗಿ ನೊಂದಣಿ ಸಂಖ್ಯೆ ನೀಡುತ್ತದೆ. 30ದಿನಗಳೊಳಗಾಗಿ ನೊಂದಣಿ ಮಾಡಿರದಿದ್ದರೆ 500ರೂಪಾಯಿಯ ದಂಡವನ್ನು ತೆರಬೇಕಾಗುತ್ತದೆ. 
ಇಲಾಖೆಯು ನೀಡಿದ ಈ ನೋಂದಣಿ ಸಂಖ್ಯೆಯನ್ನು ಬೆಲೆಪಟ್ಟಿಯಲ್ಲಿ (ಇನ್ವಾಯಿಸ್) ನಮೂದಿಸುವುದು  ಕಡ್ಡಾಯವಾಗಿದೆ.   
ತೆರಿಗೆ ದರ: ಪ್ರಾರಂಭದಲ್ಲಿ ಸೇವಾತೆರಿಗೆಯು ಶೇಕಡ 5 ರಷ್ಟಿದ್ದು ನಂತರ 14.5.2002ರಿಂದ 09.09.2004ರ ವರೆಗೂ ಶೇಕಡ 8ಕ್ಕೂ, ತದನಂತರ 10.9.2004ರಿಂದ ಶೇಕಡ 10ಕ್ಕೆ ಏರಿಸಲಾಯಿತು. ಜೊತೆಗೆ ಶಿಕ್ಷಣ ತೆರಿಗೆಯಾಗಿ ಶೇಕಡ 2ರ ಅಧಿಭಾರವನ್ನು ಸೇವಾತೆರಿಗೆಯ ಮೇಲೆ 10.9.2004ರಿಂದ ಹೊರಿಸಲಾಯಿತು. 18.4.2006ರಿಂದ ಶೇ 12 ಕ್ಕೆ ಏರಿಸಲಾಗಿದೆ ಜೊತೆಗೆ ಶೇಕಡ 2ರ ಅಧಿಭಾರವನ್ನು ಸೇವಾತೆರಿಗೆಯ ವಿಧಿಸಲಾಗಿದೆ 
ಸೇವಾತೆರಿಗೆಯಿಂದ ವಿನಾಯತಿಗಳು: ಕರದಾತನು, ಸೇವಾತೆರಿಗೆಯ ವ್ಯಾಪ್ತಿಗೆ ಒಳಪಡುವ ಯಾವುದೇ ಸೇವೆಯನ್ನು ಈ ಕೆಳಕಂಡ ವ್ಯಕ್ತಗಳಿಗೆ ನೀಡಿದಲ್ಲಿ ಆ ಸೇವೆಗಳಿಗೆ  ಸೇವಾತೆರಿಗೆಗಳಿಂದ ವಿನಾಯತಿ ಇದೆ.
ವಿಶ್ವಸಂಸ್ಥೆ, ಅಥವಾ ಅಂತರರಾಷ್ಟ್ರೀಯ ಸಂಸ್ಥೆಗಳಿಗೆ ಸೇವೆ ಸಲ್ಲಿಸಿದರೆ 
ವಿಶೇಷ ಆರ್ಥಿಕ ವಲಯದ ವ್ಯಾಪ್ತಿಗೆ ಬರುವ ಸಂಸ್ಥೆಗಳಿಗೆ ಸೇವೆ ಸಲ್ಲಿಸಿದರೆ
ಸೇವೆಯೊಂದಿಗೆ ವಸ್ತುಗಳನ್ನು ಮಾರಿದ್ದರೆ ಅವುಗಳಿಗೆ ಸೇವಾತೆರಿಗೆಯಿಂದ ವಿನಾಯತಿ ಇದೆ.
ಸೇವೆಗಳನ್ನು ವಿದೇಶಕ್ಕೆ ರಫ್ತು ಮಾಡಿದ್ದರೆ

ಸೇವೆಗೆ ಪ್ರತಿಫಲವಾಗಿ ಪುನಃಪ್ರೇಷಣ ಸಾಧ್ಯವಿಲ್ಲದ ವಿದೇಶಿ ಹಣದ ರೂಪದಲ್ಲಿ ಪಡೆದರೆ ಅದಕ್ಕೆ ವಿನಾಯತಿ ಇದೆ. 
ತೆರಿಗೆ ಕಟ್ಟಲು ಸಮಯ: ಏಪ್ರಿಲ್ 5, ಜುಲೈ  5, ಅಕ್ಟೋಬರ್ 5, ಮತ್ತು ಮಾರ್ಚ್ 31ರೊಳಗೆ ಕಟ್ಟಬೇಕು
ಅರ್ಧವಾರ್ಷಿಕ ವರದಿ: ಅಕ್ಟೋಬರ್ 25 ಹಾಗು ಏಪ್ರಿಲ್ 25ರೊಳಗೆ ಸಲ್ಲಿಸಬೇಕು.
(ಜಿ.ಎಸ್.ಎಸ್.)